ಲಿಂಗಾಯತ ಧಾರ್ಮ ಪ್ರತ್ಯೇಕ ಧರ್ಮ | ಜಯ ಮೃತ್ಹುಂಜಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ | Oneindia Kannada

2017-11-06 5

Lingayat separate religion: Controversial statement of Basava Jaya Mruthyunjaya Swamiji of Koodalasangama Panchamasali Math in Hubballi during Lingayat rally on Sunday (Nov 5) for separate religion status for Lingayat.


ಲಿಂಗಾಯಿತ ಪ್ರತ್ಯೇಕ ಧರ್ಮ: ಶಿವಶಿವಾ.. ಸಂತರ ಬಾಯಿಯಿಂದ ಇಂಥಾ ಮಾತಾ? ಲಿಂಗಾಯಿತ ಪ್ರತ್ಯೇಕ ಧರ್ಮ ಎನ್ನುವ ಕೂಗಿಗೆ ಬೆಂಕಿಹಚ್ಚಿದವರು, ತನ್ನ ಪಾಡಿಗಿದ್ದ ಮಗುವನ್ನು ಚಿವಟಿ, ಅದು ಅಳೋಕೆ ಶುರುಮಾಡಿದ ಮೇಲೆ, ಅದನ್ನೂ ಸಮಾಧಾನವೂ ಪಡಿಸದೆ, ಮೂಲೆಯಲ್ಲಿ ಕೂತು ಮುಸಿಮುಸಿ ನಗುವಂತೆ ಮಾಡಿದೆ ಪ್ರತ್ಯೇಕ ಧರ್ಮದ ಈ ಹೋರಾಟ. ಇಡೀ ನಾಡೇ ನಡೆದಾಡುವ ದೇವರೆಂದೇ ಗೌರವಿಸುವ ಸಿದ್ದಗಂಗಾ ಶ್ರೀಗಳೇ ಲಿಂಗಾಯಿತ ಮತ್ತು ವೀರಶೈವ ಎರಡೂ ಒಂದೇ ಧರ್ಮ ಎಂದು ಹೇಳಿದ ಮೇಲೂ, ಪ್ರತ್ಯೇಕ ಧರ್ಮದ ಹೋರಾಟ, ಅಸೆಂಬ್ಲಿ ಚುನಾವಣೆಯ ಈ ಹೊಸ್ತಿಲಲ್ಲಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.ಎರಡೂ ಸಮುದಾಯವೂ ಒಂದೇ, ಹಿಂದೂ ಧರ್ಮವನ್ನು ಒಡೆಯುವ ಕೆಲಸ ಬೇಡ ಎನ್ನುವ ಉಡುಪಿ ಹಿರಿಯ ಪೇಜಾವರ ಶ್ರೀಗಳಿಗೆ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತರ್ ಅವರಿಗೆ 'ನಮ್ಮ ವಿಚಾರ ನಾವು ನೋಡಿಕೊಳ್ಳುತ್ತೇವೆ, ನೀವು ತಲೆಹಾಕಬೇಡಿ' ಎನ್ನುವ ಹೇಳಿಕೆಗಳು, ಪ್ರತ್ಯೇಕ ಧರ್ಮಕ್ಕೆ ಹೋರಾಡುತ್ತಿರುವ ಕೆಲವು ಮುಖಂಡರು/ಸ್ವಾಮೀಜಿಗಳಿಂದ ಬರುತ್ತಿದೆ.